Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Tuesday, October 28, 2014

ಬಿಸಿ ಬಿಸಿ ಚರ್ಚೆ

ಬಿಸಿ ಬಿಸಿ ಚರ್ಚೆ

 
"ಅಯ್ಯೋ ದೇವ್ರೇ,ಇವತ್ತಾದ್ರೂ ಒಂದು ನಿಮಿಷ ಆರಾಮವಾಗಿ ವಿರಮಿಸೋಣ"  ಎನ್ನುತ್ತಾ ಸ್ಟಾಫ್ ರೂಮಿನಲ್ಲಿ ಉಪನ್ಯಾಸಕಿ ಶಾಂತಲಾ ಕುರ್ಚಿಯನ್ನು ಎಳೆದುಕೊಂಡು ಕುಳಿತು ನಿರಾಳವಾಗಿ ಉಸಿರಾಡಿದಳು.
"ನಾನು ಇಷ್ಟು ಕೆಲ್ಸ ಮಾಡಿದ್ರೂ ಈ ಪ್ರಿನ್ಸಿಪಾಲ್ ಮೇಡಂನಿಂದ ಬೈಸಿಕೊಳ್ಳುವುದು ತಪ್ತಾನೆ ಇಲ್ಲ. ನಂಗಂತೂ ಈ ಕಾಲೇಜಿನಲ್ಲಿ ಕಲಿಸೋದು ಸಾಕಾಗಿ ಹೋಗಿದೆ" ಎಂದು ಹಿಂದಿ ಉಪನ್ಯಾಸಕಿ ಜಯಾ ದೂರಿದಳು.
"ಏಯ್ ರಮೇಶ್, ಬಾರೋ ಇಲ್ಲಿ ಹತ್ತು ಗಂಟೆ ಆಯ್ತಲ್ಲ ಲೊಂಗ್ ಬೆಲ್ ಹೊಡಿ ವಿದ್ಯಾರ್ಥಿಗಳೆಲ್ಲ ಕ್ಲಾಸ್ ನೊಳಗೆ ಹೋಗ್ತಾರೆ. ಹತ್ತುಕಾಲಿಗೆ ಪಿರಿಯಡ್ ಬೆಲ್ ಹೊಡೆದು ಬಿಡಬೇಡ. ನಾವು ಹೇಳಿದಾಗ ಹೊಡೆಯುವಂತೆ" ಎಂದು ಇನ್ನೋರ್ವ ಉಪನ್ಯಾಸಕರು ಅಟೆಂಡರ್ ಗೆ ಹೇಳಿದಾಗ ರಮೇಶ್ ತಲೆಯಾಡಿಸಿದ.
ಲಾಂಗ್ ಬೆಲ್ ಹೊಡೆದಾಗ ವಿದ್ಯಾರ್ಥಿಗಳೆಲ್ಲರೂ ಕ್ಲಾಸಿನೊಳಗೆ ಬಂದು ಕಲಿಸಿದನ್ನು ಮನನ ಮಾಡಿಕೊಳ್ಳಬೇಕು.
"ನಮ್ಮದು ಸರಕಾರಿ ಕಾಲೇಜು, ಆದ್ರೂ ಈ ಪ್ರಿನ್ಸಿಪಾಲ್ ಮೇಡಂ, ಇವರಪ್ಪನ ಆಸ್ತಿ ಎಂದು ಕೊಂಡಿದ್ದಾರೆ. ನಮ್ಮನ್ನೆಲ್ಲ ಎಷ್ಟು ಕೆಟ್ಟದಾಗಿ ನಡೆಸಿಕೊಳ್ತಾರೆ ನೋಡಿ. ನಿನ್ನೆ ಬರೆ ಐದು ನಿಮಿಷ ಮೊದಲು ಕ್ಲಾಸ್ ಬಿಟ್ಟಿದ್ದಕ್ಕೆ ನಂಗೆ ಸಿಕ್ಕಾಪಟ್ಟೆ ಉಗಿದ್ರು ಬೇಕಿತ್ತಾ ಈ ನೌಕರಿ" ಶ್ರೀಧರ ಉಪನ್ಯಾಸಕರು ಕೊಂಕು ನುಡಿದರು.

'ಸಂತೋಷಕ್ಕೆ ಈ ಹಾಡು ಸಂತೋಷಕ್ಕೆ'---- ಎಂದು ಹಾಡುತ್ತಾ,ಅದೇವರ್ಷನೌಕರಿಗೆ ಹೊಸದಾಗಿ ಬಂದಿರುವ ಯತಿರಾಜ ಉಪನ್ಯಾಸಕರುಕುರ್ಚಿಯಿಂದೆದ್ದು ಎದುರಿನ ಮೇಜಿನ ಮೇಲೆ ಹಾರಿ ಕುಳಿತರು.
ನಾವೆಲ್ಲಾ ಒಟ್ಟಾಗಿ ಮೇಡಂ ರನ್ನು ಪ್ರತಿಭತಿಸೋಣ.ಮೊದಲು ಮೀಟಿಂಗ್ ಮಾಡಿ. ನಮಗೆ ನಿಮ್ಮ ಹತ್ತಿರ ಮಾತನಾಡುವದಿದೆ ಎಂದು ನಾನೇ ಮುಂದಾಗಿ ಹೇಳುವೆ. ನೀವೆಲ್ಲ ಪ್ರೋತ್ಸಾಹ ಕೊಡಿ" ಎಂದರು.
ಅಷ್ಟೊತ್ತಿಗೆ ಅಲ್ಲಿಗೆ ಬಂದ ಹಿರಿಯ ಶಶಿಕಾಂತ ಉಪನ್ಯಾಸಕರು 'ಇದು ಸ್ಟಡಿ ಅವರ್ ಎಂದು ಪ್ರಿನ್ಸಿಪಾಲ್ ಮೇಡಂ ಹೇಳಿದ್ದು ಮರೆತು ಬಿಟ್ರಾ,ಹೋಗ್ರಿ, ಮೇಲ್ವಿಚಾರಣೆ ಮಾಡಿ ಎಂದುಯತಿರಾಜ್ ಉಪನ್ಯಾಸಕರನ್ನು ಎಚ್ಚರಿಸಿದರು. ಅದಕ್ಕೆ ಅವರು " ಈ ದಿನ ಬೇಡಬಿಡಿ"ಎಂದು ಪ್ರತ್ಯುತ್ತರಿಸಿದರು. ಎಲ್ಲರೂ ಒಟ್ಟಾಗಿ ಮೇಜು ಬಡಿದು ಒಪ್ಪಿಗೆ ಸೂಚಿಸಿದರು.
ಸಮಯವಾದ್ದರಿಂದ ಅಟೆಂಡರ್ ರಮೇಶ್ ಲಾಂಗ್ ಬೆಲ್ ಹೊಡೆದ. ವಿದ್ಯಾರ್ಥಿಗಳು ವರ್ಗದೊಳಗೆ ಬಂದು ಸೇರಿದಾಗ ಗಲಾಟೆ ತಾರಕಕ್ಕೇರಿತ್ತು.

ಇತ್ತ ಉಪನ್ಯಾಸಕರು ಮಾತಿನಲ್ಲಿ ಮೈಮರೆತರು. ಎರಡೇ ನಿಮಿಷ ಅಷ್ಟೆ! ಇದ್ದಕಿದ್ದ ಹಾಗೆ ಕ್ಲಾಸುಗಳಲ್ಲಿ ಗಲಾಟೆ ಸ್ತಭ್ದವಾಯಿತು. ಪ್ರಿನ್ಸಿಪಾಲ್ ಮೇಡಂ, ತಾವು ಬರಲು ತಡವಾಗಬಹುದೆಂದು ಹಿರಿಯ ಉಪನ್ಯಾಸಕರಿಗೆ ತಿಳಿಸಿದ್ದರೂ ಕೆಲಸ ಮುಗಿದಿದ್ದರಿಂದ ಶಾರ್ಟ್ ಕಟ್ ಮಾರ್ಗವಾಗಿ ಕಾಲೇಜಿನ ಎಡಭಾಗದಿಂದ ಬಂದದ್ದು ಯಾರಿಗೂ ತಿಳಿಯಲೇ ಇಲ್ಲ.
ಬಂದವರೇ ಎಲ್ಲ ವರ್ಗಗಳಿಗೂ ಹೊರಗಡೆಯಿ೦ದಲೇ ಒಂದು ರೌಂಡ್ ಹೋಗಿ ಬಂದಾಗ ವರ್ಗಗಳಲ್ಲಿಯ ವಿದ್ಯಾರ್ಥಿಗಳು ಇವರನ್ನು ನೋಡಿದಾಗ ಸ್ತಭ್ದರಾದರು.
ಇದ್ದಕ್ಕಿದ್ದ ಹಾಗೇ ವಿದ್ಯಾರ್ಥಿಗಳು ಶಾಂತರಾಗಿದ್ದು ಅರಿತಾಗ ಉಪನ್ಯಾಸಕರೆಲ್ಲರೂ ಎಚ್ಚೆತ್ತರು.
ಅಷ್ಟರಲ್ಲಿ ಪ್ರಿನ್ಸಿಪಾಲ್ ಮೇಡಂ ತಾವೇ ಪಿರಿಯಡ್ ಬೆಲ್ ಹೊಡೆದು ಉಪನ್ಯಾಸಕರ ರೂಮ್ ಗೆ ಬರಹತ್ತಿದರು. ಉಪನ್ಯಾಸಕರು ಗಲಿಬಿಲಿಗೊಂಡು ತಮ್ಮ ಪುಸ್ತಕಗಳನ್ನು ಕೈಯಿಂದ ಬಾಚಿಕೊಂಡು ತಮ್ಮ ತಮ್ಮ ಕ್ಲಾಸಿಗೆ ತೆರಳಿದರು.
ಎಂದಿನಂತೆ ವರ್ಗಗಳಲ್ಲಿ ಕಲಿಕೆ ಸರಾಗವಾಗಿ ಸಾಗುವದನ್ನರಿತ ಪ್ರಿನ್ಸಿಪಾಲ್ ಮೇಡಂ ತಮ್ಮ ಮುಂದಿನಕೆಲಸಕ್ಕೆ ಅಣಿಯಾದರು.
ಅಸ್ಷ್ಟು ಹೊತ್ತು ನಡೆದ ಉಪನ್ಯಾಸಕರ ಬಿಸಿ-ಬಿಸಿ ಚರ್ಚೆ ವಿಫಲಗೊಂಡಿತ್ತು.

             By Indu Naik

 
 
 

 

 

2 comments :