Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Monday, April 20, 2015

Akshaya Thritiya

Akshaya Thritiya, an auspicious day
 
This year Akshaya Thritiya falls on April 21st, that is  on tomorrow. I wish you all well in advance let the festival bring you prosperity and joy.
 
It is celebrated by Hindus across the country. It is believed that it is an auspicious day as it's the birthday of Lord Parusharama, the sixth incarnation of Lord Vishnu.
 
'Akshaya' means one that never diminishes, that's inexhaustible. There are several mythological legends which stress the day being fruitful and prominent. On this day Kubera, the banker in heavan was blessed by Lakshmi, the Goddess of wealth. Kubera has an inexhaustible supply his wealth never decreases.
Sacred river Ganga is said to have descended onto the earth from heaven. Pandavas got unlimited supply of food from the Akshya Patra, and Sudhama was said to have been blessed by Lord Krishna-all happened on this day, that is what I had read.
 
 
 People specially buy gold, one gram at least, as it is the ultimate symbol of wealth and prosperity, hoping that it keeps multiplying in their household.
 
 
 
 Vehicles, home appliances- TV, refrigerators, washing-machines cars and other valuables are bought on this day. Shops and dealers fascinate the customers with attractive offers and discounts.
 
'Charity begins at home' as we say, it is one of the part of this festive. some of the items  donated, feeding the poor are other activities carried out by the people. Hence Akshya Thritiya is a good day for good deeds. Happy Akshaya Thritiya!
 
 
                    Indu Naik

Saturday, April 4, 2015

ಹಣ

ಹಣ

ವಿದೇಶದಲ್ಲಿರುವ ನನ್ನ ಮಗಳು ವಾಟ್ಸ್ಆಪ್ ನಲ್ಲಿ ಒಂದು ಮೆಸೇಜ್ ಕಳಿಸಿದ್ದಳು. "ಹಣ ಉಪ್ಪು ಇದ್ದಂತೆ. ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ " ಎಂದು.
ಅದನ್ನು ಓದಿದಾಗ ಎಂತಹ ಅರ್ಥಗರ್ಭಿತವಾದ ಮಾತಿದು ಎನ್ನಿಸಿತ್ತು.

ಆಗ ತಾನೆ ನಾನು ನನ್ನ ಪತಿ ಊಟವಾದ ಬಳಿಕ ಆಪ್ತರ ಮನೆಗೆ ಹೋಗಲು ನಿರ್ಧರಿಸಿದ್ದೆವು.ಆದ್ದರಿಂದ ಸಮಯ ಹಾಳು ಮಾಡದೆ ನೇರ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಲು ಸುರು ಮಾಡಿದೆ.
ಅಭ್ಯಾಸದ ಬಲದಿಂದ ನನ್ನ ಕೈ ಅಡುಗೆ ಮಾಡುತ್ತಿದ್ದರೂ, ಮನಸ್ಸಿನಲ್ಲಿ ಮಗಳು ಕಳಿಸಿದ ಮೆಸೇಜ್ ಗುಂಯ್ ಗುಡುತ್ತಿತ್ತು.

ಹೌದಲ್ಲ. ಜೀವನದಲ್ಲಿ ಹಣ ಎಷ್ಟು ಮುಖ್ಯ. ಹಣವಿಲ್ಲದ ಬಾಳು ಊಹಿಸಲು ಸಾಧ್ಯವಿಲ್ಲ.  ದಿನದ ಆರಂಭವಾಗುವುದು ಹಣದಿಂದಲೇ, ಕೊನೆಗೊಳ್ಳುವುದು ಹಣದಿಂದಲೇ. ಹಣ ಎಲ್ಲದಕ್ಕೂ ಬೇಕು. ಆಹಾರ ಧಾನ್ಯ ಖರೀದಿಸಲು, ಮನೆಕಟ್ಟಲು, ಶಿಕ್ಷಣ ಪಡೆಯಲು, ವೈದ್ಯಕೀಯ ಚಿಕಿತ್ಸೆಗೆ, ಪ್ರಯಾಣಿಸಲು ಹೀಗೆ ನಿತ್ಯ-ಜೀವನದಲ್ಲಿ ಸಾವಿರಾರು ಅವಶ್ಯಕತೆ ಪೂರೈಸಲು ಹಣ ಬೇಕೇ ಬೇಕು.

"ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ,"ದುಡ್ಡೇ ದೊಡ್ಡಪ್ಪ" ಎನ್ನುವುದೆಲ್ಲಾ ಹಳೆಯ ಗಾದೆಮಾತು. ನೆಂಟರಿಷ್ಟರಿರಲಿ, ಹಿತೈಷಿಗಳಿರಲಿ,ಆಪ್ತರಿರಲಿ, ಅಥವಾ ಇನ್ನ್ಯಾರೆ ಇರಲಿ  ಎಲ್ಲರೊಡನೆ ಅರಿತು ಬಾಳಲು ಎನ್ನುವುದಕ್ಕಿಂತ ಬೆರೆತು ಬಾಳಲು ನಮ್ಮ ಕೈಯಲ್ಲಿ ಹಣ ಇರಬೇಕು. "ಹಣ ಇಲ್ಲದವ ತೃಣಕ್ಕೆ ಸಮಾನ" ಎನ್ನುವುದು ನನ್ನ ಜೀವನದ ಅನುಭವದ ಮಾತು.


ಜಗತ್ತು ನಡೆಯುವುದೇ ಹಣದಿಂದ. ಮನುಷ್ಯನ ಬಣ್ಣ-ಬುಧ್ಧಿ ಎಲ್ಲವೂ ಬದಲಾಗುವುದು ಹಣದಿಂದ.
ಹಣವಿಲ್ಲದೆ ವ್ಯವಹಾರವಿಲ್ಲ. ಇಂದಿನ ದಿನಗಳಲ್ಲಿ ಹಣ ಇದ್ದರೆ ದೇವಸ್ಥಾನದಲ್ಲಿ ನಮ್ಮ ಇಷ್ಟ ದೇವರ ನೇರ ದರ್ಶನ ಮಾಡಬಹುದು ಸಾಲಿನಲ್ಲಿ ನಿಂತು ಕಾಯಬೇಕಂತಿಲ್ಲ.

ವಾಸ್ತವಿಕತೆಯಲ್ಲಿ ಎಲ್ಲರೂ ಹಣಕ್ಕಾಗಿಯೇ ದುಡಿಯುತ್ತಾರೆ. ಸಂತೋಷಕ್ಕಾಗಿ ಅಲ್ಲ. ದಿನ-ನಿತ್ಯ ಕಛೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, 8-10 ತಾಸು ದುಡಿಯುವ ಮುಖ್ಯ ಉದ್ದೇಶ ಹಣವನ್ನು ಗಳಿಸುವುದು. ಬ್ಯಾಂಕ್ ನಲ್ಲಿ ನಮ್ಮ ಖಾತೆ ಖಾಲಿಯಾಗಿಲ್ಲ, ಖಾತೆಯಲ್ಲಿ ಹಣವಿದೆ ಎಂದಾಗ ನಾವೆಷ್ಟು ಸುರಕ್ಷಿತವಾಗಿರ್ತೇವೆ, ಸಮಾಧಾನದಿಂದ ಇರ್ತೇವೆ.

ಹಣದ ಭ್ರಾಂತಿ ಅಂತಹದ್ದು. ಹಣವಿದ್ದರೆ ಜೀವನ ಸ್ವರ್ಗ ಎನಿಸುತ್ತದೆ.

ಇನ್ನೊಂದು ಕ್ಷಣ ಇದಕ್ಕೆ ವ್ಯತಿರಿಕ್ತವಾಗಿ, ಹಣವೇ ಎಲ್ಲವೂ ಆಗಲು ಸಾಧ್ಯವೇ ಎಂದು ಯೋಚಿಸಿದೆ.

ಹಣ ನಮಗೆ ದೊಡ್ಡ-ಸುಂದರ ಮನೆ ಕೊಡಬಹುದು ಆದರೆ ಮನಶ್ಯಾಂತಿ ಅಲ್ಲ. ರುಚಿಕಟ್ಟಾದ ಆಹಾರ, ದುಬಾರಿ ವೈದ್ಯಕೀಯ ಚಿಕಿತ್ಸೆ ಕೊಡಬಹುದು ಆದರೆ ಒಳ್ಳೆಯ ಆರೋಗ್ಯ ಅಲ್ಲ.

ಹಣ ನಮಗೆ ಉತ್ತಮ ರಕ್ಷಣೆ ಕೊಡಬಹುದು ಆದರೆ ಭದ್ರತೆ ಅಲ್ಲ. ಅತ್ಯುತ್ತಮವಾದ ಹಾಸಿಗೆ ಕೊಡಬಹುದು ಆದರೆ ಗಾಢ ನಿದ್ದೆಯಲ್ಲ. ಹಣ ರೋಗಿಗೆ ರಕ್ತ ಕೊಡಬಹುದು ಆದರೆ ಜೀವ ಅಲ್ಲ. ಹಾಗಾಗಿ  ಹಣದ ನಿಯಮಿತ ಬಳಕೆ ಬೇಕು.
ಹಣದ ಗುಲಾಮರಾಗಬಾರದು. ಹಣದ ಹಪಾಹಪಿ ಬೇಡ.


ಹಣ ಕ್ಷಣಿಕ. ಮನುಷ್ಯನ ಉಳಿವಿಗೆ ಹಣ ಬೇಕು ಆದರೆ  ಅದರಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಹಾಗಾಗಿ ಹಣ ಜೀವನದಲ್ಲಿ ಸರ್ವಸ್ವವೂ ಅಲ್ಲ.

ಹಣದ ಬಗ್ಗೆ ಇನ್ನೂ ಗಾಢವಾಗಿ ಆಲೋಚನೆ ಮಾಡಿದ್ದರೆ ಇನ್ನೂ ಹೆಚ್ಚು ಆಳವಾದ ಉನ್ನತ ವಿಚಾರ  ಬರುತ್ತಿತ್ತೇನೋ ಗೊತ್ತಿಲ್ಲ. ಅಷ್ಟೊತ್ತಿಗೆ ಅಡುಗೆ ಮುಗಿದು ಸಮಯವಾದ್ದರಿಂದ ಬಡಿಸಲು ಅಣಿಯಾದೆ.
  
                                                  
                                                             Indu Naik



(ಅತಿ ಕಡಿಮೆ ಸಮಯದಲ್ಲಿ ಹಣದ ಬಗ್ಗೆ ಹೊಸ ವಿಚಾರ ನಿಮಗೆ ಬಂದರೆ ನನ್ನ ಕಾಮೆಂಟ್ ನಲ್ಲಿ ಬರೆಯಿರಿ.)