Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Friday, May 15, 2015

ಅಮ್ಮ-ನನ್ನ ನೆನಪಿನ ಖಜಾನೆ

ಅಮ್ಮ- ನನ್ನ ನೆನಪಿನ ಖಜಾನೆ
 
                ನನ್ನ ತಾಯಿ ಇನ್ನಿಲ್ಲ. ಈಗ ಅವಳು ನನ್ನ ನೆನಪಿನ ಖಜಾನೆ ಮಾತ್ರ. ಈ ತಾಯಿಯ ನೆನಪು ಮೊಗೆದಷ್ಟು ಬಗೆದಷ್ಟು ಖರ್ಚಾಗದ ಖಜಾನೆ. ನಾನು ನನ್ನ ತಾಯಿಯನ್ನು ನೆನೆದಾಗ ಸಹಜವಾದ ಒಂದು ಪ್ರಶ್ನೆ ನನ್ನ ಮನದಲ್ಲೇಳುತ್ತದೆ. 'ಈ ಅಮ್ಮನಿಗಿಂತ ಬೇರೆ ದೇವರಿದ್ದಾರೇಯೇ?'. ಸಾಧ್ಯವೇ ಇಲ್ಲ.
 
       'ವಿಶ್ವ ಅಮ್ಮನ ದಿನ'ದಂದು ನನ್ನ ತಮ್ಮ ವಾಟ್ಸ ಆಪ್ ನಲ್ಲಿ ಒಂದು ಮೆಸೇಜ್ ಕಳುಹಿಸಿದ್ದ. "ಪ್ರತಿಯೊಂದು ಮನೆಯಲ್ಲೂ ದೇವರು ಇರಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ಮನೆಯಲ್ಲೂ ದೇವರು ಅಮ್ಮನನ್ನು ಸೃಷ್ಟಿಸಿ ದ್ದಾನೆ" ಎಂದು. ಇದು ಅಕ್ಷರ ಸಹ ನಿಜವಾದ ಮಾತು ಅಲ್ವಾ?
 
        ಅಮ್ಮ ಎಂದು ಕರೆಯುವ ಪರಿಕಲ್ಪನೆಗಳು--ಅಮ್ಮ,ಅವ್ವ, ಆಯಿ, ಮಮ್ಮಿ, ಮೊಮ್ ಹೀಗೆ ಬೇರೆಬೇರೆ ಆಗಿರಬಹುದು ಆದರೆ ಆ ತಾಯಿಯ ಪ್ರೀತಿಯ ಅನುಭವ ಅಲೌಕಿಕವಾದದ್ದು.
 
                ಸದಾ ನಮ್ಮೆದುರಿಗೇ ಇದ್ದು ಮಾತನಾಡುವ, ಪ್ರೀತಿ ತೋರಿಸುವ, ಈ   ಭೂಮಿ ಮೇಲೆ ಸಾಕಾರ ರೂಪವಾಗಿ ತಾಯಿ ಇದ್ದಾಳೆ. ಭೂಮಿಯಷ್ಟೇ ಸಹನೆ -ವುಳ್ಳವಳು. ಆ ತಾಯಿಯಷ್ಟು ತ್ಯಾಗ ಮಾಡುವ ವ್ಯಕ್ತಿ ಮತ್ತೊಬ್ಬರಿಲ್ಲ. ನಮಗೆ ಯಾವುದೇ ರೀತಿಯ ನೋವಾದಾಗಲೆಲ್ಲ 'ಅಮ್ಮ' ಎನ್ನುವ ಶಬ್ದ ನಮ್ಮರಿವಿಲ್ಲದೇ ನಮ್ಮಿಂದ ಹೊರಡುತ್ತದೆ ಅದಕ್ಕೆ ತಾಯಿಯ ಕರುಳು ಕತ್ತರಿಸಿಕೊಂಡು ಹುಟ್ಟಿಬಂದ ಕಾರಣವೇ ಆಗಿದೆ.
 
                 ಅಂದೊಂದು ದಿನ   ಚೀನಿ ಭಾಷೆಯ ಅತಿ ಚಿಕ್ಕ ಕಥೆ ಓದಿದಾಗ ನನಗೆ ದುಃಖ ಉಮ್ಮಳಿಸಿ ಬಂದಿತ್ತು. " ಒಬ್ಬ ವ್ಯಕ್ತಿ ತನ್ನನ್ನು ಇಷ್ಟಪಟ್ಟವರನ್ನು ಮೆಚ್ಚಿಸಲು ತನ್ನತಾಯಿಯ ಹೃದಯವನ್ನು ಕತ್ತರಿಸಿ ಎರಡು ಕೈ ಬೊಗಸೆಯಲ್ಲಿ ಆ ಹೃದಯವನ್ನು ಹಿಡಿದು ದಾರಿಯಲ್ಲಿ ನಡೆದು ಹೋಗುವಾಗ ಕಲ್ಲಿಗೆ ಕಾಲು ತಡವರಿಸಿ ಕೆಳಗೆ ಬಿದ್ದಾಗ, ತಕ್ಷಣವೇ ತಾಯಿಯ ಹೃದಯ ಕೇಳುತ್ತದೆ. 'ಮಗನೆ, ಕಾಳಜಿ ಪೆಟ್ಟಾಯಿತೇ?' ಎಂದು.
 
ಇದು ನಂಬಲರ್ಹವಾದ  ಕಥೆಯೋ ಗೊತ್ತಿಲ್ಲ ಆದರೂ ಅದರಲ್ಲಿ ಅಡಗಿದ ಆ ತಾಯಿ ಪ್ರೀತಿಗೆ ಬೆಲೆ ಕಟ್ಟಲಾದೀತೇ? ಹಾಗಾಗಿ ತಾಯಿಯ ಪ್ರೀತಿ ಸಂಜೀವಿನಿಯಂತೆ.
 
     'ಜನನಿ ಜನ್ಮಭುಮಿಶ್ಚ್ ಸ್ವರ್ಗಾದಪಿ ಗರಿಯಸೆ" ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮೇಲು ಎನ್ನುವುದು ಜಗಜ್ಜಾಹಿರವಾದದ್ದು.

'ಕಟ್ಟು-ನಿಟ್ಟಿನ ಶಿಸ್ತಿನ ಸಿಪಾಯಿಯಂತಿದ್ದ ತಂದೆ ಶಂಕರ,
ಪ್ರೀತಿ ಮಮತೆಯನ್ನೇ ಧಾರೆ ಎರೆದ ತಾಯಿ ಮನೋರಮ
ಆರು ಹೆಣ್ಣು-ಒಂದು ಗಂಡು ಇವರ ತುಂಬು ಕುಟುಂಬ
ಬೆಳೆಸಿದರೆಲ್ಲರ ಮೇಲೆ ಹರಿಸಿ ತಮ್ಮ ಸಮಾನ ಬಿಂಬ.'

  ಈ ಒಂದು ನುಡಿ ಸಾಕು ನಮ್ಮನ್ನೆಲ್ಲ ತಾಯಿ ಒಂದಿನಿತು ಬೇಧವೆಣಿಸದೆ ಸರಿ-ಸಮಾನರಾಗಿ ಹೇಗೆ ಬೆಳೆಸಿದ್ದರು ಎಂದು.
 
    ನನ್ನ ತಾಯಿ ನಮಗೆಲ್ಲ ಜನ್ಮ ಕೊಟ್ಟು, ಆರೈಕೆ ಮಾಡಿ, ಅಕ್ಷರ ಕಲಿಸಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಸಿ, ನಮ್ಮ  ಶ್ರೇಯಸ್ಸಿಗಾಗಿ ಶ್ರಮವಹಿಸಿ ತನ್ನಇಡೀ ಜೀವನವನ್ನು ತ್ಯಾಗ ಮಾಡಿದವಳು. ಅವಳ ಸರಿಸಮಾನ ಯಾರೂ ಇಲ್ಲ ಯಾವುದೂ ಇಲ್ಲ. ಆ ತಾಯಿಯ ಋಣ ತಿರಿಸಲಸಾಧ್ಯ.
 
   "ವಿಶ್ವ ಅಮ್ಮನ ದಿನ" ದ ಪ್ರತೀಕವಾಗಿ ನನ್ನ ಅಮ್ಮನ ಸಿಹಿ ನೆನಪಿನ ಬುತ್ತಿಯಿಂದ ಹೊರ ಬಂದ ಕೆಲವೇಕೆಲವು ವಾಕ್ಯಗಳಿವು.
 
  ಜಗತ್ತಿನಾದ್ಯಂತ ಎಲ್ಲ ಮಕ್ಕಳಿಗೂ ತಾಯಿಯ ಪ್ರೀತಿ ದೊರೆಯಲಿ ಎಂದು ಆಶಿಸುತ್ತೇನೆ.
                       
                                  Indu Naik
 
 
 

3 comments :

  1. True, mother is real god on earth,. Liked your chinese story.

    ReplyDelete
  2. Very Nice Indu Madam.
    Mother is the most beautiful word on the lips of mankind” ಜಗತ್ತಿನಾದ್ಯಂತ ಎಲ್ಲ ಮಕ್ಕಳಿಗೂ ತಾಯಿಯ ಪ್ರೀತಿ ದೊರೆಯಲಿ ಎಂದು ಆಶಿಸುತ್ತೇನೆ. ಈ ಸಾಲುಗಳು ತುಂಬಾ ಚೆನ್ನಾಗಿದೆ. ಧನ್ಯವಾದಗಳು.

    ReplyDelete